ಭಾನುವಾರ, ನವೆಂಬರ್ 22, 2009

ತವಕ

ಅವಿತಿರುವ ಮಾತುಗಳು
ತವಕಿಸುತಿರೆ ಹೊರಬರಲು..
ಗಾಢ ಮೌನದ ಛಾಯೆ
ಹಠಮಾಡುತಿದೆ ಬದಿಸರಿಯಲು...

ಭೋರ್ಗರೆದು ಎಲ್ಲ
ಹೇಳ ಬಂದರೆ
ಪೂರ್ಣಚಂದಿರನಂದದ ಮೊಗವು
ಮತ್ತೆ ನೂಕಿದೆ ಗಾಢ ಮೌನದೆಡೆಗೆ..

ಹುದುಗಿರುವ ಮಾತುಗಳು
ಒಂದಕ್ಕೊಂದು ಒತ್ತರಿಸಿ
ಜೀವವನು ಬಯಸುತಿರೆ..

ಕೊನೆಯದಾಗಿ ಹೊರಬರುವ ಉಸಿರಾದರೂ
ನಿನ್ನೊಡನೆ ಮಾತಾಡಲಿ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ