ಭಾನುವಾರ, ನವೆಂಬರ್ 22, 2009

ಜಾರುತಿದೆ ಹೆಸರು


ಸುರಿಯುವ ಮಳೆಯ
ಪ್ರತಿ ಹನಿಯಲೂ
ನಿನ್ನ ನೆನಪನೆ ಹುಡುಕುತ
ಹುಚ್ಚೆದ್ದು ಅಳುತ್ತಿರುವಾಗ
ಕಂಬನಿಯಲಿ ಜಾರಿಹೊಗುತ್ತಿರುವ
ನಿನ್ನ ಹೆಸರನು ಹೇಗೆ ಹಿಡಿಯಲಿ/ ತಡೆಯಲಿ?

ತವಕ

ಅವಿತಿರುವ ಮಾತುಗಳು
ತವಕಿಸುತಿರೆ ಹೊರಬರಲು..
ಗಾಢ ಮೌನದ ಛಾಯೆ
ಹಠಮಾಡುತಿದೆ ಬದಿಸರಿಯಲು...

ಭೋರ್ಗರೆದು ಎಲ್ಲ
ಹೇಳ ಬಂದರೆ
ಪೂರ್ಣಚಂದಿರನಂದದ ಮೊಗವು
ಮತ್ತೆ ನೂಕಿದೆ ಗಾಢ ಮೌನದೆಡೆಗೆ..

ಹುದುಗಿರುವ ಮಾತುಗಳು
ಒಂದಕ್ಕೊಂದು ಒತ್ತರಿಸಿ
ಜೀವವನು ಬಯಸುತಿರೆ..

ಕೊನೆಯದಾಗಿ ಹೊರಬರುವ ಉಸಿರಾದರೂ
ನಿನ್ನೊಡನೆ ಮಾತಾಡಲಿ....

ನಿನ್ನ ನೆನಪು..















ತೂರಿಬರುವ ತುಂತುರು ಮಳೆಗೆ
ಬೀಸಿಬರುವ ತಂಗಾಳಿ
ಜೊತೆಯಾದಂತೆ...

ಒತ್ತರಿಸಿ ಬರುವ ನನ್ನೀ ಕಂಬನಿಗೆ
ನಿನ್ನ ನೆನಪೇ
ಸಂಗಾತಿಯಾಗಿದೆ....

ನಿನ್ನ ನೆನಪು..


ಮತ್ತೆ ಮತ್ತೆ ನಿನ್ನದೇ
ನೆನಪು
ಕಂಬನಿಯಲಿ ಮಿಂದು, ತೋಯ್ದು
ಮಸುಕಾಗುತ್ತಿದೆ...

ಆ ಪುಟ್ಟ ಹೃದಯವನು
ಬಾಚಿ ಕೈಯಲಿ ಹಿಡಿದು
ರೆಪ್ಪೆಯಲಿ ಬಚ್ಚಿಟ್ಟು
ಜೋಪಾನ ಮಾಡಿದ್ದೆ..

ಆದರೆ...

ಕಣ್ರೆಪ್ಪೆಯನು ಹರಿದು ,
ರಕ್ತ ಕನ್ನೀರನು ಹರಿಸಿ
ನಿನ್ನ ನೆನಪಿನ ಕಂಬನಿಯನು
ಉಡುಗೊರೆಯಾಗಿ ನೀಡಿದೆ..

ಹೇಳು..

ಯಾಕೆ ಹೀಗೆ ಮಾಡಿದೆ??!!

ತೆರೆಯದ ಪುಸ್ತಕ..


ನೂರೊಂದು ಕನಸ ಹೊತ್ತು
ಭಾವನೆಗಳನ್ನು ಪೇರಿಸಿ
ಛಾಪಿಸಿದ್ದೆ ಈ ಪ್ರೀತಿಯ ಹೊತ್ತಿಗೆ...
ಮುನ್ನುಡಿಯನು ಬರೆಯಲು ನೀಡಿದರೆ
ಕೊನೆಯ ಮಾತು ಬರೆದು
ಹೀಗೇಕೆ ಬದಿಗೊತ್ತಿದೆ??

ಎದೆಯಾಳದ ನೋವು...



ನನ್ನೆದೆಯ ಆಳದಲ್ಲೆಲ್ಲೋ
ಸಿಹಿಯಾದ ನೋವು
ಮತ್ತೆ ಮತ್ತೆ ಕಾಣಿಸಿಕೊಂಡು
ಹೃದಯ ಹಿಂಡುತಿದೆ....

ಯಾಕೆಂದು ಕೇಳಿದರೆ
ಏನೆಂದು ಹೇಳಲಿ?
ನಿನ್ನ ನೆನಪೇ ಇದೆ
ಈ ನೋವಿನ ಹೃದಯದಲಿ...

ನಿನ್ನ ನೆನಪು ಮತ್ತೆ-
ಮತ್ತೆ ಕಾಡುತ ಚಿತ್ತದಲಿ
ಗಾಢವಾಗಿ ಚುಂಬಿಸಿದೆ
ಎದೆಯಾಳದಲಿ..

ಈ ನೋವನು ಸಹಿಸುವ
ಶಕ್ತಿ ನನಗಿಲ್ಲ..
ಆದರೂ ಸಮಾಧಾನ
ಈ ನೋವಿನಲೂ ಏನೋ ಹಿತವಿದೆಯಲ್ಲ...