ಗುರುವಾರ, ಮಾರ್ಚ್ 5, 2009

ತೆರೆಯದ ಪುಸ್ತಕ....


ನೂರೊಂದು ಕನಸ ಹೊತ್ತು...
ಭಾವನೆಗಳನ್ನು ಪೇರಿಸಿ...
ಛಾಪಿಸಿದ್ದೆ ಈ ಪ್ರೀತಿಯ ಹೊತ್ತಿಗೆ....
ಮುನ್ನುಡಿಯನ್ನು ಬರೆಯಲು ನೀಡಿದರೆ...
ಕೊನೆಯಮಾತು ಬರೆದು ಏಕೆ
ಹೀಗೆ ಬದಿಗೊತ್ತಿದೆ??

ದೂರಾದೆಯಾ....


ಬಂದು ನಿಂತರೂ ಎದುರಿಗೆ
ನೋಡಲಿಲ್ಲವೆಂದು ಕೈಬೀಸಿ ಹೋದೆಯಲ್ಲಾ....
ಎಲ್ಲೆಂದರಲ್ಲಿ ನಿನ್ನನ್ನೇ ಹುಡುಕುವ ಈ ಕಂಗಳ
ಪ್ರಯತ್ನವನ್ನು ನೀನು ಅರಿಯಲೇ ಇಲ್ಲಾ.....

ಏನು ಮಾಡಲಿ??!!


ಕಣ್ಮುಚ್ಚಿದರೆ ನೆನಪುಗಳ ಕದ ತೆರೆಯುವುದು....
ಕಣ್ಬಿಟ್ಟರೆ ಕಂಬನಿ ಜಾರುವುದು....
ಏನು ಮಾಡಲಿ ಎಂದರಿಯದ ಜೀವ...
ಇಡೀ ರಾತ್ರಿ ಚಂದ್ರನ ಮೇಲೆ ಗೀಚುತ್ತಿದ್ದೆ ನನ್ನ ನೋವ...

ಬಚ್ಚಿಟ್ಟ ಮಾತು....


ಎದೆಯಲ್ಲಿ ಬಚ್ಚಿಟ್ಟ ನೂರಾರು ಮಾತನ್ನು
ಬಿಚ್ಚಿಡುವ ಬಗೆಯನ್ನು ಅರಿಯದೇ
ಪ್ರತಿ ಮಾತನ್ನೂ..
ಕಣ್ಣಂಚಿನ ಕಂಬನಿಯಾಗಿಸಿದ್ದೇನೆ.....